ಭಾಷೆಗಳನ್ನು ಕಲಿಯುವುದು

ಭಾರತ ಹಲವು ಭಾಷೆಗಳ ದೇಶ. ಇಲ್ಲಿ ಸುಮಾರು ಜನರಿಗೆ ಕಡಿಮೆ ಅಂದರೂ ಎರಡು ಭಾಷೆಗಳು ಬರುತ್ತವೆ. ಹಲವರಿಗೆ ಮೂರು ಅಥವಾ ನಾಲ್ಕು ಭಾಷೆಗಳು ಬರುತ್ತವೆ. ಕೆಲವರಿಗೆ ವಿಶೇಷ ಪ್ರಯತ್ನ ಇಲ್ಲದೆ ಅದಕ್ಕಿಂತಲೂ ಜಾಸ್ತಿ ಭಾಷೆಗಳು ಬರುತ್ತವೆ. ಜನರು ಬೇರೆ ಬೇರೆ ಸನ್ನಿವೇಶಗಳಲ್ಲಿ ಬೇರೆ ಬೇರೆ ಭಾಷೆಗಳನ್ನು ಉಪಯೋಗಿಸಿಕೊಂಡು ಅವರ ಕೆಲಸ ಮಾಡುತ್ತಾರೆ.

ನನ್ನ ತಂದೆ ಪಂಜಾಬ್ ಮತ್ತು ನನ್ನ ತಾಯಿ ಬಿಹಾರದವರು. ಮನೆಯಲ್ಲಿ ಅವರು ಇಬ್ಬರು ಪರಸ್ಪರ ಮಾತನಾಡುವ ಭಾಷೆ ಹಿಂದಿ. ಅದಕ್ಕೆ ನನ್ನ ಮಾತೃಭಾಷೆ ಹಿಂದಿ ಆಗಿದೆ. ಶಾಲೆಯಲ್ಲಿ ಇಂಗ್ಲಿಶ್ ಕಲಿತೆ. ನನ್ನ ಅಜ್ಜಿಗೆ ಒಂದೇ ಒಂದು ಭಾಷೆ ಗೊತ್ತಿತ್ತು. ಅದು ಪಂಜಾಬಿ. ಅವರ ಜೊತೆ ಮಾತಾಡಿ ಮಾತಾಡಿ ನನಗೆ ಸ್ವಲ್ಪ ಪಂಜಾಬಿಯೂ ಮಾತನಾಡುವುದಕ್ಕೆ ಬಂತು, ಆದರೆ ಜಾಸ್ತಿ ಅಭ್ಯಾಸ ಆಗಲಿಲ್ಲ. ಇಂಗ್ಲಿಶ್ ಮಾಧ್ಯಮಿಕ ಶಾಲೆಯಲ್ಲಿ ಮೂರು ವರ್ಷದ ವಯಸ್ಸಿನಿಂದ ಕಲಿತುಕೊಂಡರೂ ಸುಲಭವಾಗಿ ಇಂಗ್ಲಿಶ್ ಮಾತನಾಡುವುದಕ್ಕೆ ಹತ್ತು ವರ್ಷ ಆಯ್ತು. ಶಾಲೆಯಲ್ಲಿ ಐದನೆ ತರಗತಿಯಿಂದ ಹತ್ತನೇ ತರಗತಿ ವರೆಗೆ ನಾವು ಸಂಸ್ಕೃತ ಕೂಡ ಓದಿದ್ವಿ. ಬರಿ ವ್ಯಾಕರಣ ಓದಿ ಉಪಯೋಗ ಮಾಡದಿದ್ದರೆ ಯಾವ ಭಾಷೆಯನ್ನೂ ಕಲಿಯುವುದಕ್ಕೆ ಸಾಧ್ಯ ಇಲ್ಲ. ಆದರೆ ಬಹಳ ವರ್ಷ ಆದಮೇಲೆ ಸಂಸ್ಕೃತವ್ಯಾಕರಣದ ಜ್ಞಾನ ನನಗೆ ಉಪಯೋಗವಾಯಿತು. ಅದಕ್ಕೆ ಹೇಳುತ್ತಾರೆ ಕಲಿತಿದ್ದು ಯಾವತ್ತು ವ್ಯರ್ಥ ಆಗಲ್ಲ ಅಂತ.

ವಿದ್ಯಾರ್ಥಿಯಾಗಿದ್ದಾಗ ನನಗೆ ಭಾಷೆಗಳಲ್ಲಿ ಇಷ್ಟು ಆಸಕ್ತಿ ಇರಲಿಲ್ಲ, ಆದರೆ ಲಿಪಿಗಳಲ್ಲಿ ಆಸಕ್ತಿ ಇತ್ತು. ಒಂದು ಸಲ ನಾನು ನನ್ನ ಅಣ್ಣನ ಮದುವೆಗೆ ಜಲಂಧರಕ್ಕೆ ಹೊಗಿದ್ದೆ. ನಾನು ಒಂದು ವಾರ ಅಲ್ಲಿ ಇದ್ದೆ. ಆವಾಗ ರಸ್ತೆಗಳಲ್ಲಿ ನಡೆದುಕೊಂಡು ಓಡಾಡುವಾಗ ಅಂಗಡಿಗಳ ಪಂಜಾಬಿ ಮತ್ತು ಇಂಗ್ಲಿಶ್ ಭಾಷೆಗಳ ದ್ವಿಭಾಷಾ ಫಲಕಗಳನ್ನು ಓದಿ ಓದಿ ಪಂಜಾಬಿ ಭಾಷೆಯ ಗುರುಮುಖಿ ಲಿಪಿಯನ್ನು ಕಲಿತೆ. ಅದೇ ರೀತಿ ಹೈದರಾಬಾದಿನಲ್ಲಿ ಒಂದು ವಾರದೊಳಗೆ ತೆಲುಗು ಭಾಷೆ ಗೊತ್ತಿರದಿದ್ದರೂ ಅದರ ಲಿಪಿಯನ್ನು ಕಲಿತೆ. ಆಮೇಲೆ ಲಿಪಿಗಳಲ್ಲಿ ಆಸಕ್ತಿ ಇನ್ನು ಹೆಚ್ಚಾಯ್ತು, ಮತ್ತು ಸುಮಾರು ಎಲ್ಲಾ ಭಾರತೀಯ ಭಾಷೆಗಳ ಲಿಪಿಗಳನ್ನು ಪುಸ್ತಕಗಳಿಂದ ಕಲಿತೆ.

ನಂತರ ಬಹಳ ವರ್ಷ ಯಾವ ಹೊಸ ಭಾಷೆಯನ್ನು ಕಲಿತುಕೊಳ್ಳುವುದಕ್ಕೆ ಪ್ರಯತ್ನ ಮಾಡಲಿಲ್ಲ. ಆವಾಗ-ಇವಾಗ ಸಂಸ್ಕೃತ, ಪಂಜಾಬಿ, ಭೋಜಪುರಿ ಮತ್ತು ಉರ್ದು ಪುಸ್ತಕಗಳನ್ನು ಓದುತ್ತಾ ಇದ್ದೆ. ಬೆಂಗಳೂರಿಗೆ ಬಂದಮೇಲೆ ಕನ್ನಡ ಕಲಿಯುವುದಕ್ಕೆ ಯಾವ ಒತ್ತಾಯವು ಇರಲಿಲ್ಲ , ಆದರೆ ಕನ್ನಡ ಕಲಿತರೆ ಚೆನ್ನಾಗಿರುತ್ತೆ ಅಂತ ಅನ್ನಿಸಿತು. ಮೊದಲು ಪುಸ್ತಕದಿಂದ ಕನ್ನಡ ಕಲಿಯುವುದಕ್ಕೆ ಪ್ರಯತ್ನ ಮಾಡಿದೆ, ಆದರೆ ಜಾಸ್ತಿ ಸಫಲತೆ ಸಿಗಲಿಲ್ಲ. ಆಮೇಲೆ ನನ್ನ ಕಾರ್ಯಾಲಯದಲ್ಲಿ ಕನ್ನಡ ತರಗತಿ ಶುರುವಾಯ್ತು. ಇನ್ನೂರು ಜನರು ಸೇರಿದ್ದರು. ಶಿಕ್ಷಕರು ಕನ್ನಡ ಸಾಹಿತ್ಯ ಪರಿಷತ್ತಿನ ರಾಘವನ್ ಅವರು. ಮೂರು ತಿಂಗಳು ಆದಮೇಲೆ ಮೊದಲನೆ ಹಂತ ಮುಗಿತು. ಆವಾಗ ರಾಘವನ್ ಅವರು ಎರಡನೆ ಹಂತದ ಘೋಷಣೆ ಮಾಡಿದರು. ಅದಕ್ಕೆ ಇನ್ನೂರು ವಿಧ್ಯಾರ್ಥಿಗಳಲ್ಲಿ ಬರಿ ಇಪ್ಪತ್ತು ಜನರು ಬಂದರು. ಎರಡನೆ ಹಂತ ಆದಮೇಲೆ ನಮ್ಮಲ್ಲಿ ಮೂರು ಜನರು ಸೇರಿ ಕಾರ್ಯಾಲಯದಲ್ಲಿ ಆವಾಗ-ಇವಾಗ ಕನ್ನಡ ಓದುತ್ತಾ ಇದ್ವಿ. ಆ ಮೇಲೆ ಅದು ಕೂಡ ನಿಂತು ಹೋಯಿತು.

ಅದರ ನಂತರ ಕಾರ್ಯಾಲಯದಲ್ಲಿ ಮ್ಯಾಂಡರಿನ್ ಭಾಷೆಯ ತರಗತಿ ನಡೆಯಿತು. ಅಲ್ಲೂ ಓದಿದೆ, ಆದರೆ ಈಗ ಹೆಚ್ಚು ಮ್ಯಾಂಡರಿನ್ ಜ್ಞಾಪಕ ಇಲ್ಲ. ಸಂಸ್ಕೃತಭಾರತೀ ಮೂಲಕ ಮತ್ತೆ ಸಂಸ್ಕೃತ ಓದುವುದು ಶುರುವಾಯ್ತು. ಇವಾಗಲೂ ಐದು ವರ್ಷದಿಂದ ಸಂಸ್ಕೃತ ಓದುವುದು, ಕಲಿಸುವುದು, ಭಾಷಾಂತರಿಸುವುದು ಮಾಡುತ್ತೇನೆ.

ಒಂದು ವರ್ಷದ ಹಿಂದೆ ನನ್ನ ಸಹೋದ್ಯೋಗಿ ಕುಶಲ್ ಅವರು ಕನ್ನಡ ತರಗತಿ ಶುರು ಮಾಡಿದರು. ನನ್ನ ಕನ್ನಡ ಓದುವುದು ಮತ್ತೆ ಶುರುವಾಯ್ತು. ಇವಾಗ ನಾನು ಅವಕಾಶ ಸಿಕ್ಕಿದರೆ ಕನ್ನಡದಲ್ಲಿ ಮಾತನಾಡುವುದಕ್ಕೆ ಪ್ರಯತ್ನ ಮಾಡುತ್ತೇನೆ. ಸ್ವಲ್ಪ ಬರಿಯುವುದಕ್ಕೂ ಪ್ರಯತ್ನ ಮಾಡುತ್ತೇನೆ.

ಕನ್ನಡ ಕಲಿಯುವುದಕ್ಕೆ ಕಾರಣ ಏನಂದರೆ ಹೇಗೆ ನನಗೆ ನನ್ನ ಮಾತೃಭಾಷೆಯಲ್ಲಿ ಮಾತನಾಡುವುದು ಇಷ್ಟ, ಹಾಗೆನೇ ನನಗೆ ಬೇರೆಯವರ ಜೊತೆ ಅವರ ಮಾತೃಭಾಷೆಯಲ್ಲಿ ಮಾತನಾಡುವುದಕ್ಕೆ ಇಷ್ಟ.

ಒಂದು ದಿನ ನಾನು ಕೂಡ ಸುಲಭವಾಗಿ ಕನ್ನಡದಲ್ಲಿ ಮಾತನಾಡಬಹುದು ಅಂತ ಆಶಿಸುತ್ತೇನೆ.

Corrections and consultation by Kushal D Murthy.

Advertisements

Tags: ,

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s


%d bloggers like this: