Posts Tagged ‘Kannada’

“ಪ್ರೆಸ್” ಘಟನೆ

27 July, 2015

ಎರಡು ವರ್ಷದ ಹಿಂದೆ ಒಮ್ಮೆ ಒಂದು ಇಂಗ್ಲಿಶ್ ಪತ್ರಿಕೆಯ ಪತ್ರಕರ್ತರು ನನಗೆ ಫೋನ್ ಮಾಡಿದರು.

“ನಿಮ್ಮ ಕಾರ್ಯಾಲಯದಲ್ಲಿ ಜನರು ಸಂಸ್ಕೃತವನ್ನು ಕಲಿತಾ ಇದ್ದಾರೆ ಅಂತ ನನಗೆ ಗೊತ್ತಾಯ್ತು. ನಾವು ಐಟಿ ಸಂಸ್ಥೆಗಳಲ್ಲಿ ಸಂಸ್ಕೃತ ಕಲಿಯುವುದರ ಬಗ್ಗೆ ಒಂದು ಪ್ರಬಂಧ ಬರೆಯಬೇಕು. ಅದಕ್ಕೋಸ್ಕರ ನಿಮ್ಮ ಸಹಾಯ ಬೇಕು.” ಅಂತ ಅವರು ಹೇಳಿದರು.

“ಒಳ್ಳೆಯ ವಿಚಾರ! ಏನು ಸಹಾಯ ಬೇಕು ನಿಮಗೆ?”

“ನಿಮ್ಮ ಕಾರ್ಯಾಲಯಕ್ಕೆ ಬಂದು ಸಂಸ್ಕೃತ ವಿದ್ಯಾರ್ಥಿಗಳ ಜೊತೆ ಮಾತಾಡುತ್ತೇನೆ. ನಿಮ್ಮ ಕಾರ್ಯಾಲಯದಲ್ಲಿ ಸಂಸ್ಕೃತ ವಿದ್ಯಾರ್ಥಿಗಳ ಫ್ಹೋಟೋ ತೆಗೆಯಬಹುದಾ?”

“ಖಂಡಿತ ಫೋಟೋ ತೆಗೆಯಬಹುದು, ಆದರೆ ಮುಂಚೆ ಕಾವಲು ಅಧಿಕಾರಿಯ ಅನುಮತಿಯನ್ನು ತಗೊಬೇಕು. ನಾವು ಸಂಸ್ಕೃತ ಓದುವುದಕ್ಕೆ ಪ್ರತಿ ಗುರುವಾರ ಸೇರುತ್ತೇವೆ. ನೀವು ಬರುವ ಗುರುವಾರ ನಮ್ಮ ಕಾರ್ಯಾಲಯಕ್ಕೆ ಬನ್ನಿ. ಅದಕ್ಕೆ ಮುಂಚೆ ನಾನು ಫೋಟೋ ತೆಗೆಯುವುದಕ್ಕೆ ಅನುಮತಿಯನ್ನು ತಗೊತೇನೆ.”

ಮುಂದಿನ ದಿನ ಮತ್ತೆ ಅವರ ಫೋನ್ ಬಂತು.

“ನಾನು ನಿಮ್ಮ ಕಾರ್ಯಾಲಯಕ್ಕೆ ಬಂದಾಗ ಹೊರಗಡೆ ಫೋಟೋ ತೆಗೆಯಬಹುದಾ?”

ಕಾರ್ಯಾಲಯದ ಫಲಕದ ಅಕ್ಕ-ಪಕ್ಕ ಎಲ್ಲ ವಿದ್ಯಾರ್ಥಿಗಳು ನಿಂತುಕೊಂಡು ಫೋಟೋ ತೆಗೆಯುವುದು ಅಂತ ಕಲ್ಪಿಸಿಕೊಂಡು ನಾನು ಹೇಳಿದೆ – “ಹೌದು, ಹಾಗೆ ಮಾಡಬಹುದು.”

“ಒಂದು ಮರದ ಕೆಳಗೆ ನೆಲದಲ್ಲಿ ಎಲ್ಲ ಕುಲಿತುಕೊಂಡು ಫೋಟೋ ತೆಗೆಯಬಹುದಾ?”

“ಆ ತರಹ ಎಲ್ಲರು ಕುಳಿತುಕೊಳ್ಳಲು ಜಾಗ ಇರುವ ಮರ ನಮ್ಮ ಕಾರ್ಯಾಲಯದಲ್ಲಿ ಇಲ್ಲ.”

“ನಿಮ್ಮ ಕಾರ್ಯಾಲಯದಲ್ಲಿ ಇಲ್ಲದಿದ್ದರೆ ಹತ್ತಿರ ಎಲ್ಲಾದರೂ ಆ ತರಹದ ಮರ ಸಿಗುತ್ತದಾ?”

“ನೀವು ಮರದ ಕೆಳಗೆ ಯಾಕೆ ಫೋಟೋ ತೆಗೆಯಬೇಕು? ನಮ್ಮ ತರಗತಿ ಭೇಟಿಯ ಕೊಠಡಿಯಲ್ಲಿ ನಡೆಯುತ್ತದೆ.”

“ನಮ್ಮ ಸಂಪಾದಕರ ಮನಸ್ಸಿನಲ್ಲಿ ಪ್ರಬಂಧಕ್ಕೆ ಒಂದು ತರಹದ ಕಲ್ಪನೆ ಇದೆ. ಅವರ ಪ್ರಕಾರ ಸಂಸ್ಕೃತ ತರಗತಿಯು ಮರದ ನೆರಳಿನಲ್ಲಿದ್ದರೆ ಫೋಟೋ ಚೆನ್ನಾಗಿರುತ್ತದೆ.”

“ಆದರೆ ಅದು ಸರಿಯಾಗಿಲ್ಲ. ನಾವು ಕೊಠಡಿಯಲ್ಲಿ ಸಂಸ್ಕೃತ ಓದುತ್ತೇವೆ. ನಿಜವಾದ ತರಗತಿಯಲ್ಲಿ ಯಾಕೆ ಫೋಟೋ ತೆಗೆಯಲ್ಲ?”

“ಸಂಸ್ಕೃತ ಓದುವುದಕ್ಕೆ ಮರದ ನೋಟ ಚೆನ್ನಾಗಿರುತ್ತದೆ.”

“ಹಾಗಾದರೆ ನಾನು ಬೇರೆ ಸಂಸ್ಕೃತ ಓದುವವರ ಪರಿಚಯ ಮಾಡಿಸುತ್ತೇನೆ. ನಿಮ್ಮ ಪ್ರಬಂಧಕ್ಕೋಸ್ಕರ ಭಾಗವಹಿಸುವುದಕ್ಕೆ ನನಗೆ ಆಸಕ್ತಿ ಇಲ್ಲ.”

ಅದರ ನಂತರ ಮತ್ತೆ ಅವರ ಫೋನ್ ಬಂದಿಲ್ಲ.

Corrections and consultation by Kushal D Murthy and B Raghavan.

Advertisements

ಭಾಷೆಗಳನ್ನು ಕಲಿಯುವುದು

12 January, 2015

ಭಾರತ ಹಲವು ಭಾಷೆಗಳ ದೇಶ. ಇಲ್ಲಿ ಸುಮಾರು ಜನರಿಗೆ ಕಡಿಮೆ ಅಂದರೂ ಎರಡು ಭಾಷೆಗಳು ಬರುತ್ತವೆ. ಹಲವರಿಗೆ ಮೂರು ಅಥವಾ ನಾಲ್ಕು ಭಾಷೆಗಳು ಬರುತ್ತವೆ. ಕೆಲವರಿಗೆ ವಿಶೇಷ ಪ್ರಯತ್ನ ಇಲ್ಲದೆ ಅದಕ್ಕಿಂತಲೂ ಜಾಸ್ತಿ ಭಾಷೆಗಳು ಬರುತ್ತವೆ. ಜನರು ಬೇರೆ ಬೇರೆ ಸನ್ನಿವೇಶಗಳಲ್ಲಿ ಬೇರೆ ಬೇರೆ ಭಾಷೆಗಳನ್ನು ಉಪಯೋಗಿಸಿಕೊಂಡು ಅವರ ಕೆಲಸ ಮಾಡುತ್ತಾರೆ.

ನನ್ನ ತಂದೆ ಪಂಜಾಬ್ ಮತ್ತು ನನ್ನ ತಾಯಿ ಬಿಹಾರದವರು. ಮನೆಯಲ್ಲಿ ಅವರು ಇಬ್ಬರು ಪರಸ್ಪರ ಮಾತನಾಡುವ ಭಾಷೆ ಹಿಂದಿ. ಅದಕ್ಕೆ ನನ್ನ ಮಾತೃಭಾಷೆ ಹಿಂದಿ ಆಗಿದೆ. ಶಾಲೆಯಲ್ಲಿ ಇಂಗ್ಲಿಶ್ ಕಲಿತೆ. ನನ್ನ ಅಜ್ಜಿಗೆ ಒಂದೇ ಒಂದು ಭಾಷೆ ಗೊತ್ತಿತ್ತು. ಅದು ಪಂಜಾಬಿ. ಅವರ ಜೊತೆ ಮಾತಾಡಿ ಮಾತಾಡಿ ನನಗೆ ಸ್ವಲ್ಪ ಪಂಜಾಬಿಯೂ ಮಾತನಾಡುವುದಕ್ಕೆ ಬಂತು, ಆದರೆ ಜಾಸ್ತಿ ಅಭ್ಯಾಸ ಆಗಲಿಲ್ಲ. ಇಂಗ್ಲಿಶ್ ಮಾಧ್ಯಮಿಕ ಶಾಲೆಯಲ್ಲಿ ಮೂರು ವರ್ಷದ ವಯಸ್ಸಿನಿಂದ ಕಲಿತುಕೊಂಡರೂ ಸುಲಭವಾಗಿ ಇಂಗ್ಲಿಶ್ ಮಾತನಾಡುವುದಕ್ಕೆ ಹತ್ತು ವರ್ಷ ಆಯ್ತು. ಶಾಲೆಯಲ್ಲಿ ಐದನೆ ತರಗತಿಯಿಂದ ಹತ್ತನೇ ತರಗತಿ ವರೆಗೆ ನಾವು ಸಂಸ್ಕೃತ ಕೂಡ ಓದಿದ್ವಿ. ಬರಿ ವ್ಯಾಕರಣ ಓದಿ ಉಪಯೋಗ ಮಾಡದಿದ್ದರೆ ಯಾವ ಭಾಷೆಯನ್ನೂ ಕಲಿಯುವುದಕ್ಕೆ ಸಾಧ್ಯ ಇಲ್ಲ. ಆದರೆ ಬಹಳ ವರ್ಷ ಆದಮೇಲೆ ಸಂಸ್ಕೃತವ್ಯಾಕರಣದ ಜ್ಞಾನ ನನಗೆ ಉಪಯೋಗವಾಯಿತು. ಅದಕ್ಕೆ ಹೇಳುತ್ತಾರೆ ಕಲಿತಿದ್ದು ಯಾವತ್ತು ವ್ಯರ್ಥ ಆಗಲ್ಲ ಅಂತ.

ವಿದ್ಯಾರ್ಥಿಯಾಗಿದ್ದಾಗ ನನಗೆ ಭಾಷೆಗಳಲ್ಲಿ ಇಷ್ಟು ಆಸಕ್ತಿ ಇರಲಿಲ್ಲ, ಆದರೆ ಲಿಪಿಗಳಲ್ಲಿ ಆಸಕ್ತಿ ಇತ್ತು. ಒಂದು ಸಲ ನಾನು ನನ್ನ ಅಣ್ಣನ ಮದುವೆಗೆ ಜಲಂಧರಕ್ಕೆ ಹೊಗಿದ್ದೆ. ನಾನು ಒಂದು ವಾರ ಅಲ್ಲಿ ಇದ್ದೆ. ಆವಾಗ ರಸ್ತೆಗಳಲ್ಲಿ ನಡೆದುಕೊಂಡು ಓಡಾಡುವಾಗ ಅಂಗಡಿಗಳ ಪಂಜಾಬಿ ಮತ್ತು ಇಂಗ್ಲಿಶ್ ಭಾಷೆಗಳ ದ್ವಿಭಾಷಾ ಫಲಕಗಳನ್ನು ಓದಿ ಓದಿ ಪಂಜಾಬಿ ಭಾಷೆಯ ಗುರುಮುಖಿ ಲಿಪಿಯನ್ನು ಕಲಿತೆ. ಅದೇ ರೀತಿ ಹೈದರಾಬಾದಿನಲ್ಲಿ ಒಂದು ವಾರದೊಳಗೆ ತೆಲುಗು ಭಾಷೆ ಗೊತ್ತಿರದಿದ್ದರೂ ಅದರ ಲಿಪಿಯನ್ನು ಕಲಿತೆ. ಆಮೇಲೆ ಲಿಪಿಗಳಲ್ಲಿ ಆಸಕ್ತಿ ಇನ್ನು ಹೆಚ್ಚಾಯ್ತು, ಮತ್ತು ಸುಮಾರು ಎಲ್ಲಾ ಭಾರತೀಯ ಭಾಷೆಗಳ ಲಿಪಿಗಳನ್ನು ಪುಸ್ತಕಗಳಿಂದ ಕಲಿತೆ.

ನಂತರ ಬಹಳ ವರ್ಷ ಯಾವ ಹೊಸ ಭಾಷೆಯನ್ನು ಕಲಿತುಕೊಳ್ಳುವುದಕ್ಕೆ ಪ್ರಯತ್ನ ಮಾಡಲಿಲ್ಲ. ಆವಾಗ-ಇವಾಗ ಸಂಸ್ಕೃತ, ಪಂಜಾಬಿ, ಭೋಜಪುರಿ ಮತ್ತು ಉರ್ದು ಪುಸ್ತಕಗಳನ್ನು ಓದುತ್ತಾ ಇದ್ದೆ. ಬೆಂಗಳೂರಿಗೆ ಬಂದಮೇಲೆ ಕನ್ನಡ ಕಲಿಯುವುದಕ್ಕೆ ಯಾವ ಒತ್ತಾಯವು ಇರಲಿಲ್ಲ , ಆದರೆ ಕನ್ನಡ ಕಲಿತರೆ ಚೆನ್ನಾಗಿರುತ್ತೆ ಅಂತ ಅನ್ನಿಸಿತು. ಮೊದಲು ಪುಸ್ತಕದಿಂದ ಕನ್ನಡ ಕಲಿಯುವುದಕ್ಕೆ ಪ್ರಯತ್ನ ಮಾಡಿದೆ, ಆದರೆ ಜಾಸ್ತಿ ಸಫಲತೆ ಸಿಗಲಿಲ್ಲ. ಆಮೇಲೆ ನನ್ನ ಕಾರ್ಯಾಲಯದಲ್ಲಿ ಕನ್ನಡ ತರಗತಿ ಶುರುವಾಯ್ತು. ಇನ್ನೂರು ಜನರು ಸೇರಿದ್ದರು. ಶಿಕ್ಷಕರು ಕನ್ನಡ ಸಾಹಿತ್ಯ ಪರಿಷತ್ತಿನ ರಾಘವನ್ ಅವರು. ಮೂರು ತಿಂಗಳು ಆದಮೇಲೆ ಮೊದಲನೆ ಹಂತ ಮುಗಿತು. ಆವಾಗ ರಾಘವನ್ ಅವರು ಎರಡನೆ ಹಂತದ ಘೋಷಣೆ ಮಾಡಿದರು. ಅದಕ್ಕೆ ಇನ್ನೂರು ವಿಧ್ಯಾರ್ಥಿಗಳಲ್ಲಿ ಬರಿ ಇಪ್ಪತ್ತು ಜನರು ಬಂದರು. ಎರಡನೆ ಹಂತ ಆದಮೇಲೆ ನಮ್ಮಲ್ಲಿ ಮೂರು ಜನರು ಸೇರಿ ಕಾರ್ಯಾಲಯದಲ್ಲಿ ಆವಾಗ-ಇವಾಗ ಕನ್ನಡ ಓದುತ್ತಾ ಇದ್ವಿ. ಆ ಮೇಲೆ ಅದು ಕೂಡ ನಿಂತು ಹೋಯಿತು.

ಅದರ ನಂತರ ಕಾರ್ಯಾಲಯದಲ್ಲಿ ಮ್ಯಾಂಡರಿನ್ ಭಾಷೆಯ ತರಗತಿ ನಡೆಯಿತು. ಅಲ್ಲೂ ಓದಿದೆ, ಆದರೆ ಈಗ ಹೆಚ್ಚು ಮ್ಯಾಂಡರಿನ್ ಜ್ಞಾಪಕ ಇಲ್ಲ. ಸಂಸ್ಕೃತಭಾರತೀ ಮೂಲಕ ಮತ್ತೆ ಸಂಸ್ಕೃತ ಓದುವುದು ಶುರುವಾಯ್ತು. ಇವಾಗಲೂ ಐದು ವರ್ಷದಿಂದ ಸಂಸ್ಕೃತ ಓದುವುದು, ಕಲಿಸುವುದು, ಭಾಷಾಂತರಿಸುವುದು ಮಾಡುತ್ತೇನೆ.

ಒಂದು ವರ್ಷದ ಹಿಂದೆ ನನ್ನ ಸಹೋದ್ಯೋಗಿ ಕುಶಲ್ ಅವರು ಕನ್ನಡ ತರಗತಿ ಶುರು ಮಾಡಿದರು. ನನ್ನ ಕನ್ನಡ ಓದುವುದು ಮತ್ತೆ ಶುರುವಾಯ್ತು. ಇವಾಗ ನಾನು ಅವಕಾಶ ಸಿಕ್ಕಿದರೆ ಕನ್ನಡದಲ್ಲಿ ಮಾತನಾಡುವುದಕ್ಕೆ ಪ್ರಯತ್ನ ಮಾಡುತ್ತೇನೆ. ಸ್ವಲ್ಪ ಬರಿಯುವುದಕ್ಕೂ ಪ್ರಯತ್ನ ಮಾಡುತ್ತೇನೆ.

ಕನ್ನಡ ಕಲಿಯುವುದಕ್ಕೆ ಕಾರಣ ಏನಂದರೆ ಹೇಗೆ ನನಗೆ ನನ್ನ ಮಾತೃಭಾಷೆಯಲ್ಲಿ ಮಾತನಾಡುವುದು ಇಷ್ಟ, ಹಾಗೆನೇ ನನಗೆ ಬೇರೆಯವರ ಜೊತೆ ಅವರ ಮಾತೃಭಾಷೆಯಲ್ಲಿ ಮಾತನಾಡುವುದಕ್ಕೆ ಇಷ್ಟ.

ಒಂದು ದಿನ ನಾನು ಕೂಡ ಸುಲಭವಾಗಿ ಕನ್ನಡದಲ್ಲಿ ಮಾತನಾಡಬಹುದು ಅಂತ ಆಶಿಸುತ್ತೇನೆ.

Corrections and consultation by Kushal D Murthy.

ಕನ್ನಡ ಮಾತನಾಡುವ ಸ್ಪರ್ಧೆ

1 November, 2014

ಕನ್ನಡ ಮಾತನಾಡುವ ಸ್ಪರ್ಧೆ

ವಿಕ್ರಮ: ನಮಸ್ಕಾರ ಸುಬ್ರತೊ-ಅವರೇ, ಹೇಗಿದ್ದೀರಾ?

ಸುಬ್ರತೊ: ಚೆನ್ನಾಗಿದ್ದೇನೆ, ನೀವು ಹೇಗಿದ್ದೀರಾ? ನಿಮ್ಮ ಕನ್ನಡ ಕ್ಲಾಸ್ ಹೇಗೆ ನಡಿತಾ ಇದೆ?

ವಿಕ್ರಮ: ಕ್ಲಾಸ್ ಚೆನ್ನಾಗಿ ನಡಿತಾ ಇದೆ, ಒಂದು ವರ್ಷ ಆಯ್ತು.

ಸು: ಒಂದು ವರ್ಷದಲ್ಲಿ ಸುಲಭವಾಗಿ ಕನ್ನಡ ಮಾತಾಡುವುದಕ್ಕೆ ಆಗತ್ತಾ?

ವಿ: ಹಾಗೆ ಅಲ್ಲ. ಬರಿ ವ್ಯಾಕರಣ ಚೆನ್ನಾಗಿ ಬರತ್ತೆ, ಮಾತಾಡುವುದಕ್ಕೆ ಇದುವರೆಗೂ ಕಷ್ಟ.

ಸು: ಬೆಂಗಳೂರಿನಲ್ಲಿ ಕನ್ನಡ ಮಾತಾಡುವುದಕ್ಕೆ ಅಭ್ಯಾಸ ಮಾಡುವುದಕ್ಕೆ opportunity ಸಿಗಲ್ಲ, ಅಲ್ಲವಾ?

ವಿ; ಅದು ನಿಜ. ರಸ್ತೆಗಳಲ್ಲಿ, ಅಂಗಡಿಗಳಲ್ಲಿ, ಬಸ್ಸಿನಲ್ಲಿ, ಆಟೋದಲ್ಲಿ, ಆಫಿಸಿನಲ್ಲಿ, ಎಲ್ಲಾಕಡೆ ಬಹಳ ಜನರು ಹಿಂದಿ ಅಥವಾ ಇಂಗ್ಲಿಶ್ ಮಾತಾಡುತ್ತರೆ.

ಸು: ಕನ್ನಡದ ಅಭ್ಯಾಸ ಮಾಡುವುದಕ್ಕೆ ಬೆಂಗಳೂರಿನಿಂದ ಹೊರಗಡೆ ಹೋಗಬೇಕು.

ವಿ: ನಾನು ಮೂರು ತಿಂಗಳ ಮುಂಚೆ ಮೈಸೂರಿಗೆ ಹೊಗಿದ್ದೆ. ಅಲ್ಲಿ ರಸ್ತೆಯಲ್ಲಿ ಗಾಡಿ ನಿಲ್ಲಿಸಿ ಒಬ್ಬರನ್ನು ಕೇಳಿದೆ – ಅರಮನೆ ಎಲ್ಲಿ ಬರುತ್ತದೆ? ಅಂತ. ಅವರು ಹೇಳಿದರು – यहाँ से आगे जाइये, फिर left लीजिये।

ಸು: (ನಗುತ್ತಾ) ಹೌದಾ? ನಿಮ್ಮ ಮುಖ ನೊಡಿ ಜನರು automatically ಹಿಂದಿಯಲ್ಲಿ ಮಾತಾಡುತ್ತಾರಾ?

ವಿ: ಗೊತ್ತಿಲ್ಲ. ಹೋದತಿಂಗಳು ನಾನು ಒಬ್ಬರು ಟ್ಯಾಕ್ಸಿ ದ್ರೈವರನ್ನು ನನ್ನ ಮನೆಗೆ ಬರುವುದಕ್ಕೆ ಫೋನ-ಅಲ್ಲಿ ದಾರಿ ಹೇಳುತ್ತಾ ಇದ್ದೆ. ಸ್ವಲ್ಪ ಸಮಯದ ನಂತರ ನನ್ನ ಕನ್ನಡ ಚೆನ್ನಾಗಿಲ್ಲ ಅಂತ ಅವರಿಗೆ ಗೊತ್ತಾಯ್ತು. ಅವರು ಕೇಳಿದರು – “ಸರ್, ನೀವು ತೆಲುಗು ಮಾತಾಡುತ್ತೀರಾ, ತಮಿಳು ಮಾತಾಡುತ್ತೀರಾ?” ನನ್ನಗೆ ತುಂಬ ಸಂತೋಷವಾಯ್ತು – ಹಿಂದಿಯಿಂದ ತೆಲುಗು ಮತ್ತು ತಮಿಳಿಗೆ ಬಂದಿದ್ದೇನೆ ಅಂದರೆ ನನ್ನ ಕನ್ನಡ improve ಆಗಿದೆ.

ಸು: (ನಗುತ್ತಾ) ನನ್ನದೂ ಒಂದು ಕಥೆ. ಮುಂಚೆ ಯಾವಾಗ ನಾನು ಕನ್ನಡ ಕಲಿಯುತ್ತಾ ಇದ್ದೆ ಒಂದು ಸಲ ಒಬ್ಬರು ಆಟೋದ್ರೈವರ್-ಜೊತೆ ನನ್ನ argument ಆಯ್ತು. ನಾನು somehow ತೆಲುಗು, ತಮಿಳು ಮತ್ತು ಸಂಸ್ಕೃತ ಶಬ್ದಗಳನ್ನು ಸೇರಿಸಿ ಕನ್ನಡ ವಾಕ್ಯ ರಚಿಸಿ ಹೇಳುತ್ತ ಇದ್ದೆ. ಅವರು ಕೇಳಿದರು –

“ಸರ್, ನೀವು ಮಂಗಳೂರಿನಿಂದಾ?”

“ಯಾಕಂತ ಕೇಳುತ್ತೀರಾ?”

“ನೀವು ಇಷ್ಟು ಒಳ್ಳೆಯ ಕನ್ನಡ ಮಾತಾಡುತ್ತೀರಾ, ನನ್ನಗೆ ಅರ್ಥಾನೇ ಆಗುತ್ತಾ ಇಲ್ಲ”

ವಿ: ಆದರೆ ಕನ್ನಡ ಮಾತಾಡುವುದು ಸಮಯದ ಜೊತೆ ಪರ್ಫ಼ೆಕ್ಟ್ ಆಗುತ್ತೆ. ನಾವು ಹತ್ತು ವರ್ಷದಿಂದ ಬೆಂಗಳೂರಿನಲ್ಲಿ ಇದ್ದೇವೆ, ಈಕಡೆಯ ಭಾಷೆ ಇದುವರೆಗೆ ನಾವು ಕಲಿತುಕೊ ಬೇಕಿತ್ತು.

ಸು: ಹೌದು. ನಾನು ಈ ಸೋಮವಾರ ಕೋಲ್ಕತ್ತದಿಂದ ವಾಪಸ್ ಬರ್ತಿದ್ದೆ, ಟ್ರೈನ್ ಕೆ.ಆರ್. ಪುರಂ ಸ್ಟೇಷನ್ ಅಲ್ಲಿ ಎಂಟರ್ ಅಗುತ್ತ ಇದ್ದಾಗ ನನ್ನಗೆ ಗುಲ್ಮೊಹರ್ ಮರದ ಕೆಂಪು ಹೂಗಳನ್ನ ನೋಡಿ ನನಗೆ ಅನ್ನಿಸಿತು ನಾನು ನನ್ನ ಊರಿಗೆ ವಾಪಸ್ ಬಂದಿದ್ದೇನೆ ಅಂತ.

ವಿ: ಅದು ನಿಜ. ಈಗ ಬೆಂಗಳೂರೇ ನಮ್ಮ ಊರು.

This was our entry in the Kannada speaking contest as part of the Kannada Rajyotsava celebration at work.

Enacted by Subrato Roy (as himself) and Reghu Neelakantan (as Vikram).

Last anecdote courtesy Preetam Tadeparthy.

Parting thoughts courtesy Subrato Roy.

Corrections and consultation by Kushal D Murthy.