Posts Tagged ‘Press’

“ಪ್ರೆಸ್” ಘಟನೆ

27 July, 2015

ಎರಡು ವರ್ಷದ ಹಿಂದೆ ಒಮ್ಮೆ ಒಂದು ಇಂಗ್ಲಿಶ್ ಪತ್ರಿಕೆಯ ಪತ್ರಕರ್ತರು ನನಗೆ ಫೋನ್ ಮಾಡಿದರು.

“ನಿಮ್ಮ ಕಾರ್ಯಾಲಯದಲ್ಲಿ ಜನರು ಸಂಸ್ಕೃತವನ್ನು ಕಲಿತಾ ಇದ್ದಾರೆ ಅಂತ ನನಗೆ ಗೊತ್ತಾಯ್ತು. ನಾವು ಐಟಿ ಸಂಸ್ಥೆಗಳಲ್ಲಿ ಸಂಸ್ಕೃತ ಕಲಿಯುವುದರ ಬಗ್ಗೆ ಒಂದು ಪ್ರಬಂಧ ಬರೆಯಬೇಕು. ಅದಕ್ಕೋಸ್ಕರ ನಿಮ್ಮ ಸಹಾಯ ಬೇಕು.” ಅಂತ ಅವರು ಹೇಳಿದರು.

“ಒಳ್ಳೆಯ ವಿಚಾರ! ಏನು ಸಹಾಯ ಬೇಕು ನಿಮಗೆ?”

“ನಿಮ್ಮ ಕಾರ್ಯಾಲಯಕ್ಕೆ ಬಂದು ಸಂಸ್ಕೃತ ವಿದ್ಯಾರ್ಥಿಗಳ ಜೊತೆ ಮಾತಾಡುತ್ತೇನೆ. ನಿಮ್ಮ ಕಾರ್ಯಾಲಯದಲ್ಲಿ ಸಂಸ್ಕೃತ ವಿದ್ಯಾರ್ಥಿಗಳ ಫ್ಹೋಟೋ ತೆಗೆಯಬಹುದಾ?”

“ಖಂಡಿತ ಫೋಟೋ ತೆಗೆಯಬಹುದು, ಆದರೆ ಮುಂಚೆ ಕಾವಲು ಅಧಿಕಾರಿಯ ಅನುಮತಿಯನ್ನು ತಗೊಬೇಕು. ನಾವು ಸಂಸ್ಕೃತ ಓದುವುದಕ್ಕೆ ಪ್ರತಿ ಗುರುವಾರ ಸೇರುತ್ತೇವೆ. ನೀವು ಬರುವ ಗುರುವಾರ ನಮ್ಮ ಕಾರ್ಯಾಲಯಕ್ಕೆ ಬನ್ನಿ. ಅದಕ್ಕೆ ಮುಂಚೆ ನಾನು ಫೋಟೋ ತೆಗೆಯುವುದಕ್ಕೆ ಅನುಮತಿಯನ್ನು ತಗೊತೇನೆ.”

ಮುಂದಿನ ದಿನ ಮತ್ತೆ ಅವರ ಫೋನ್ ಬಂತು.

“ನಾನು ನಿಮ್ಮ ಕಾರ್ಯಾಲಯಕ್ಕೆ ಬಂದಾಗ ಹೊರಗಡೆ ಫೋಟೋ ತೆಗೆಯಬಹುದಾ?”

ಕಾರ್ಯಾಲಯದ ಫಲಕದ ಅಕ್ಕ-ಪಕ್ಕ ಎಲ್ಲ ವಿದ್ಯಾರ್ಥಿಗಳು ನಿಂತುಕೊಂಡು ಫೋಟೋ ತೆಗೆಯುವುದು ಅಂತ ಕಲ್ಪಿಸಿಕೊಂಡು ನಾನು ಹೇಳಿದೆ – “ಹೌದು, ಹಾಗೆ ಮಾಡಬಹುದು.”

“ಒಂದು ಮರದ ಕೆಳಗೆ ನೆಲದಲ್ಲಿ ಎಲ್ಲ ಕುಲಿತುಕೊಂಡು ಫೋಟೋ ತೆಗೆಯಬಹುದಾ?”

“ಆ ತರಹ ಎಲ್ಲರು ಕುಳಿತುಕೊಳ್ಳಲು ಜಾಗ ಇರುವ ಮರ ನಮ್ಮ ಕಾರ್ಯಾಲಯದಲ್ಲಿ ಇಲ್ಲ.”

“ನಿಮ್ಮ ಕಾರ್ಯಾಲಯದಲ್ಲಿ ಇಲ್ಲದಿದ್ದರೆ ಹತ್ತಿರ ಎಲ್ಲಾದರೂ ಆ ತರಹದ ಮರ ಸಿಗುತ್ತದಾ?”

“ನೀವು ಮರದ ಕೆಳಗೆ ಯಾಕೆ ಫೋಟೋ ತೆಗೆಯಬೇಕು? ನಮ್ಮ ತರಗತಿ ಭೇಟಿಯ ಕೊಠಡಿಯಲ್ಲಿ ನಡೆಯುತ್ತದೆ.”

“ನಮ್ಮ ಸಂಪಾದಕರ ಮನಸ್ಸಿನಲ್ಲಿ ಪ್ರಬಂಧಕ್ಕೆ ಒಂದು ತರಹದ ಕಲ್ಪನೆ ಇದೆ. ಅವರ ಪ್ರಕಾರ ಸಂಸ್ಕೃತ ತರಗತಿಯು ಮರದ ನೆರಳಿನಲ್ಲಿದ್ದರೆ ಫೋಟೋ ಚೆನ್ನಾಗಿರುತ್ತದೆ.”

“ಆದರೆ ಅದು ಸರಿಯಾಗಿಲ್ಲ. ನಾವು ಕೊಠಡಿಯಲ್ಲಿ ಸಂಸ್ಕೃತ ಓದುತ್ತೇವೆ. ನಿಜವಾದ ತರಗತಿಯಲ್ಲಿ ಯಾಕೆ ಫೋಟೋ ತೆಗೆಯಲ್ಲ?”

“ಸಂಸ್ಕೃತ ಓದುವುದಕ್ಕೆ ಮರದ ನೋಟ ಚೆನ್ನಾಗಿರುತ್ತದೆ.”

“ಹಾಗಾದರೆ ನಾನು ಬೇರೆ ಸಂಸ್ಕೃತ ಓದುವವರ ಪರಿಚಯ ಮಾಡಿಸುತ್ತೇನೆ. ನಿಮ್ಮ ಪ್ರಬಂಧಕ್ಕೋಸ್ಕರ ಭಾಗವಹಿಸುವುದಕ್ಕೆ ನನಗೆ ಆಸಕ್ತಿ ಇಲ್ಲ.”

ಅದರ ನಂತರ ಮತ್ತೆ ಅವರ ಫೋನ್ ಬಂದಿಲ್ಲ.

Corrections and consultation by Kushal D Murthy and B Raghavan.

Advertisements